ಭಾರತದ ಷೇರು ಮತ್ತು ವಿನಿಮಯ ಮಂಡಳಿ
ಸೆಬಿ (SEBI) ಎಂದರೆ ಭಾರತದ ಷೇರು ಮತ್ತು ವಿನಿಮಯ ಮಂಡಳಿ (Securities and Exchange Board of India). ಇದು ಭಾರತದಲ್ಲಿ ಷೇರು ಮಾರುಕಟ್ಟೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸ್ಥಾಪಿತವಾದ ಪ್ರಾಧಿಕಾರವಾಗಿದೆ. ಸೆಬಿಯು 1988ರಲ್ಲಿ ಸ್ಥಾಪಿತವಾಗಿದ್ದು, 1992ರಲ್ಲಿ ಕಾನೂನಾತ್ಮಕ ಸ್ಥಾನವನ್ನು ಪಡೆದಿದೆ.
ಸೆಬಿಯು ಭಾರತದಲ್ಲಿ ಷೇರು ಮಾರುಕಟ್ಟೆಗಳನ್ನು ಸುಸ್ಥಿತಿಯಲ್ಲಿಡಲು ಮತ್ತು ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಮುಖ ಪಾತ್ರ ವಹಿಸುತ್ತದೆ.