ಇಂಡೆಕ್ಸ್ ಅಂದ್ರೆ ಮಾರುಕಟ್ಟೆಯ health report.
ಕೆಲ ಪ್ರಮುಖ ಕಂಪನಿಗಳ ಷೇರುಗಳ ಬೆಲೆಯ ಆಧಾರದ ಮೇಲೆ ರೂಪಿಸಲಾಗುವ ಸಂಖ್ಯೆ. ಮಾರುಕಟ್ಟೆಯ ಸ್ಥಿತಿ ಏನು ಎಂಬುದನ್ನು ತೋರಿಸುತ್ತದೆ.
ಇಂಡೆಕ್ಸ್ ಹೆಸರು | ಏನು ಸೂಚಿಸುತ್ತದೆ |
---|---|
NIFTY 50 | NSE ಯ ಪ್ರಮುಖ 50 ಕಂಪನಿಗಳ ಷೇರುಗಳ ಚಲನೆ |
SENSEX (BSE 30) | BSE ಯ 30 ದೊಡ್ಡ ಕಂಪನಿಗಳ ಷೇರುಗಳ ಚಲನೆ |
Nifty Bank | 12 ಪ್ರಮುಖ ಬ್ಯಾಂಕುಗಳ ಷೇರುಗಳ ಚಲನೆ |
Nifty IT | IT ಕಂಪನಿಗಳ ಷೇರುಗಳ ಚಲನೆ |
Nifty FMCG | ಅನ್ನ, ದಿನಬಳಕೆ ಸರಕು ಕಂಪನಿಗಳ ಷೇರುಗಳ ಚಲನೆ |
ಕೆಲವು ಆಯ್ದ ಕಂಪನಿಗಳನ್ನು ಆಯ್ದುಕೊಳ್ಳಲಾಗುತ್ತದೆ (market capitalization ಅಂದರೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ).
ಈ ಕಂಪನಿಗಳ ಷೇರುಗಳ ಬೆಲೆಯನ್ನು ಒಟ್ಟು ಮಾಡಿ ನಿರ್ದಿಷ್ಟ formula ನ್ನು ಉಪಯೋಗಿಸಿ Index Value ಅನ್ನು ಲೆಕ್ಕ ಹಾಕಲಾಗುತ್ತದೆ.Market Capitalization = Share price × Number of shares